Explore, Learn, Play & have Fun

Fun filled activities for our Community

Education

Share Knowledge for Better Tomorrow

Find out more

Sports & Adventure

Stay Health & Fit

Find out more

Social Life

Enjoy Social life together

Education

Kannada Aata Pata Shala (APS)

ಆಟ-ಪಾಠ ಕನ್ನಡ ಶಾಲೆಯ ಧ್ಯೇಯೋದ್ದೇಶಗಳು:

೧) ಕನ್ನಡ ಕಲಿಸಿ-ಸಂಸ್ಕೃತಿ ಬೆಳೆಸಿ:

ಇದು ನಮ್ಮ ದಿವ್ಯ ಮಂತ್ರ. ಕನ್ನಡ ಭಾಷೆಯನ್ನು ಕಲಿಸುವುದರ ಮೂಲಕ ನಮ್ಮ ನಾಡು-ನುಡಿ-ಜಲ-ಸಂಸ್ಕೃತಿಯ  ಬಗ್ಗೆ ಚಿಣ್ಣರ ಮನದಲ್ಲಿ ಅಭಿಮಾನ ಮತ್ತು ಆಸಕ್ತಿ ಬೆಳೆಸುವುದು. ಈ ಪ್ರಯತ್ನದಲ್ಲಿ ಅವುಗಳಿಗೆ ಇರುವ ಏಕೈಕ ಕೊಂಡಿ ಕಳಚದಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ.


೨) ಕಲಿ-ನಲಿ:

ಮಕ್ಕಳಿಗೆ ಕಲಿಕೆ ಹೊರೆ ಎನಿಸದೆ ಮೋಜಿನಿಂದ ಕೂಡಿರುವಂತೆ ಕಲಿಸಲು ಶ್ರಮಿಸುವುದು.


೩) ಸಾಹಿತ್ಯ-ಸಂಸ್ಕೃತಿಯ ನಿರೂಪಣೆ:

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಚಿಣ್ಣರ ಮೂಲಕ ನಿರೂಪಿಸುವುದು.


೪) ಆಧ್ಯಾತ್ಮಿಕ-ತಳಹದಿ:

ಮುಗ್ಧ ಮನಸ್ಸುಗಳ ವ್ಯಕ್ತಿತ್ವದ ಬೆಳವಣಿಗೆಗೆ ಆಧ್ಯಾತ್ಮಿಕ ಲೇಪನ ಕೊಡಲು ಶ್ರಮಿಸುವುದು.


Carolina Kannada Balaga started Aata Pata Shala (APS) in a motivation to help kids of expat Kannada families to learn Kannada Language. CKB encourages parents to send their kids to learn Kannada.


ಗುಬ್ಬಚ್ಚಿ ಗಳ ಹಾಡು

ಕನ್ನಡ ಬಳಗದ ಗುಬ್ಬಚ್ಚಿಗಳು ನಾವು

ಚಿಂವ್ ಚಿಂವ್ ಎಂದು ಉಲಿಯುವೆವು

ಒಲವಿನ ಭಾಷೆಯನಾಡುತ ನಾವು

ಎಲ್ಲರ ಕೂಡಿ ನಲಿಯುವೆವು  ||೧||

ಅಮ್ಮನು ನಮ್ಮನು ಹರಸುವ ಭಾಷೆ

ಅಪ್ಪನ ಜೊತೆ ಒಡನಾಟದ ಭಾಷೆ

ಗೆಳೆಯರ ಕೂಡಿ ನಲಿದಾಡುವ ಭಾಷೆ

ಆಹಾ! ಎಂಥಹ ಸುಂದರ ಭಾಷೆ  ||೨||

ಅಂದದ ಪದಗಳ ಚಂದದ ಭಾಷೆ

ಎಲ್ಲರ ಹೃದಯವ ಗೆಲ್ಲುವ ಭಾಷೆ

ಗಂಧದ ನಾಡಿನ ಚಂದನ ಭಾಷೆ

ಆಹಾ! ಎಂಥಹ ಸುಂದರ ಭಾಷೆ     ||೩||

ಕಲಿಯುತ ಬಳಸುತ ಬೆಳೆಯುವೆವು

ನಾಡಿನ ಸಂಸ್ಕೃತಿ ಬೆಳೆಸುವೆವು

ದೇಶ-ವಿದೇಶದಿ ಭಾಷೆಯ ಕಂಪನು

ಎಲ್ಲರೂ ಸೇರಿ ಹರಡುವೆವು  ||೪||

ಲೇ: ಸುಧೀರ್ ಶಿವರಾಂ




Aata Pata Shala Video: Click HERE

image14

Charity

Jamma Jamma Foundation (JJF)

Jamma Jamma Foundation (JJF) is a registered non-profit organization working in the field of childhood education. JJF primarily work with NGO’s based in India to help economically poor children with their education needs.

image23

Social Media Community Groups

Groups interested in Sports and Outdoor Activities

CLICK HERE FOR LINK